The Journey
ಚಾ ಪರ್ಕ ಕಲಾವಿದರು ಮಂಗಳೂರಿನ ಅತ್ಯಂತ ಜನಪ್ರಿಯ ತುಳು ಹಾಸ್ಯ ನಾಟಕ ತಂಡಗಳಲ್ಲಿ ಒಂದಾಗಿದೆ. ನಟನೆ, ನಿರ್ದೇಶನ, ರಚನೆ, ಗೀತಸಾಹಿತ್ಯ ಹಾಗೂ ಗಾಯನ ಕ್ಷೇತ್ರಗಳಲ್ಲಿ ಛಾಪು ಮೂಡಿಸಿ "ತೆಲಿಕೆದ ಬೊಳ್ಳಿ" ಎಂದೇ ಖ್ಯಾತರಾದ ಡಾ. ದೇವದಾಸ್ ಕಾಪಿಕಾಡ್ ಅವರು ಈ ತಂಡವನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ. ರಂಗಭೂಮಿಗೆ ಸಲ್ಲಿಸಿದ ದಶಕಗಳ ಸೇವೆಯನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾಲಯವು 2022ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕಾಪಿಕಾಡ್ ಅವರೊಂದಿಗೆ, ಭೋಜರಾಜ ವಾಮಂಜೂರು ಹಾಗೂ ನವೀನ್ ಡಿ. ಪಡೀಲ್ ಅವರನ್ನೊಳಗೊಂಡ ಹಾಸ್ಯ ದಿಗ್ಗಜರ ಸಮಾಗಮ ಈ ತಂಡದ ವಿಶೇಷತೆ. ಈ ತಂಡದ ಎಲ್ಲಾ ನಾಟಕಗಳು ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿ, ಹಲವು ಹೊಸ ನಾಟಕ ತಂಡಗಳ ಉದಯಕ್ಕೆ ಪ್ರೇರಣೆಯಾಗಿದೆ. ಕರಾವಳಿಯಷ್ಟೇ ಅಲ್ಲದೆ ದುಬೈ, ಮಸ್ಕತ್ ಸೇರಿದಂತೆ ಯುಎಇಯ ವಿವಿಧೆಡೆ ಈ ತಂಡ ಯಶಸ್ವಿ ಪ್ರದರ್ಶನಗಳನ್ನು ನೀಡಿದೆ. ಕೇವಲ ಹಾಸ್ಯವಷ್ಟೇ ಅಲ್ಲದೆ ಸಾಮಾಜಿಕ ಸಂದೇಶಗಳನ್ನು ಹಾಸ್ಯದ ಮೂಲಕ ಜನರಿಗೆ ತಲುಪಿಸಿದ 'ಚಾ ಪರ್ಕ' ತಂಡವು ತುಳು ರಂಗಭೂಮಿಗೆ ಒಟ್ಟು 61 ನಾಟಕಗಳನ್ನು ಕೊಡುಗೆಯಾಗಿ ನೀಡಿದೆ. ವಿಶೇಷವೆಂದರೆ, ಈ ಎಲ್ಲಾ 61 ನಾಟಕಗಳನ್ನೂ ಸ್ವತಃ ದೇವದಾಸ್ ಕಾಪಿಕಾಡ್ ಅವರೇ ರಚಿಸಿ, ಎಲ್ಲದರಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ತುಳು ನಾಟಕ ಲೋಕದಲ್ಲಿ ತಾವೂ ಮತ್ತು ತಮ್ಮ ತಂಡವೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ.
Meet the Collective
Creative Leadership

ಡಾ. ದೇವದಾಸ್ ಕಾಪಿಕಾಡ್
Director / Writer

ಶರ್ಮಿಳಾ ಡಿ ಕಾಪಿಕಾಡ್
Producer

ಗುರು ಬಾಯರ್
Musician
Actors

ನವೀನ್ ಡಿ ಪಡೀಲ್

ಸದಾಶಿವ ಅಮೀನ್

ಭೋಜರಾಜ್ ವಾಮಂಜೂರ್

ಸಾಯಿ ಕೃಷ್ಣ ಕುಡ್ಲ

ತಿಮ್ಮಪ್ಪ ಕುಲಾಲ್

ಸುರೇಶ್ ಕುಲಾಲ್

ರಾಜ್ ಪ್ರಕಾಶ್ ಶೆಟ್ಟಿ

ತಿಲಕ್‌ರಾಜ್ ಕೊಯಿಲ

ಸಾಯಿ ಚೇತನ್ ಪಿಲಾರ್
Upcoming Productions
Catch ಚಾ live on stage this season.







