ರಂಗ ನಕ್ಷತ್ರ – 4

ರಂಗ ನಕ್ಷತ್ರ – 4

calendar_today2026-08-04person By Vinod Manchi
ರಂಗಭೂಮಿಯಲ್ಲಿ ನಾನು ಕಂಡ ಅತ್ಯದ್ಭುತ ಯುವ ಕಲಾವಿದರಲ್ಲಿ ರಂಜಿತ್ ಸಾಂತೂರ್ ಅವರು ಪ್ರಮುಖರು. ಪ್ರಸ್ತುತ ತೆಲಿಕೆದರಸೆ ಪ್ರಸನ್ನ ಶೆಟ್ಟಿ ಬೈಲೂರು ಅವರ ಸಾರಥ್ಯದಲ್ಲಿರುವ ಚೈತನ್ಯ ಕಲಾವಿದೆರ್, ಬೈಲೂರು ತಂಡದ ಹೆಮ್ಮೆಯ ಹಾಸ್ಯ ಕಲಾವಿದರಾಗಿ, ತಮ್ಮ ಸಹಜ ಅಭಿನಯ, ಹಾಸ್ಯಪ್ರಜ್ಞೆ ಮತ್ತು ಅದ್ಭುತ ನಟನಾ ಚಾತುರ್ಯದ ಮೂಲಕ ಅಪಾರ ಕಲಾಭಿಮಾನಿಗಳ ಮನ ಗೆದ್ದ ಅಪ್ರತಿಮ ಕಲಾವಿದರಾಗಿದ್ದಾರೆ. ಅನಿವಾರ್ಯ ಕಾರಣಗಳಿಂದ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದರಿಂದ ಕೆಲಕಾಲ ರಂಗಭೂಮಿಯಿಂದ ದೂರ ಉಳಿಯಬೇಕಾಯಿತು. ಆದರೆ ಕಲೆಯ ಮೇಲಿನ ಅಪಾರ ಪ್ರೀತಿ ಹಾಗೂ ರಂಗಭೂಮಿಯ ಸೆಳೆತ ಅವರನ್ನು ಮತ್ತೆ ವೇದಿಕೆಯತ್ತ ಕರೆತಂದಿತು. ಸ್ವಲ್ಪ ವಿರಾಮದ ಬಳಿಕ ಮತ್ತೆ ಬಣ್ಣ ಹಚ್ಚಿ, "ರಾಘು ಮಾಷ್ಟ್ರು" ನಾಟಕದಲ್ಲಿ ಅತ್ಯುತ್ತಮ ಹಾಸ್ಯ ಪಾತ್ರವನ್ನು ನಿರ್ವಹಿಸುವ ಮೂಲಕ ಬೆಂಗಳೂರು, ಮಹಾನಗರ ಮುಂಬೈ ಹಾಗೂ ವಿದೇಶಗಳಲ್ಲಿಯೂ ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿರುವ ನಿಜವಾದ ರಂಗ ನಕ್ಷತ್ರ ತಾವು. ತಮ್ಮ ಕಲಾ ಪ್ರಾವೀಣ್ಯತೆಗೆ ಇನ್ನಷ್ಟು ಗೌರವ-ಪುರಸ್ಕಾರಗಳು ಲಭಿಸಲಿ. ವಿವಿಧ ಸಂಘ-ಸಂಸ್ಥೆಗಳು ತಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲಿ. ತಾಯಿ ಕಲಾ ಮಾತೆಯ ಕೃಪೆ ಹಾಗೂ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದುಹಾರೈಸುತ್ತೇವೆ.