ತುಳು ರಂಗಭೂಮಿಯ ಬಹುದೊಡ್ಡ ಆಸ್ತಿಗಳಲ್ಲಿ ಒಬ್ಬರಾಗಿರುವ ಯಶವಂತ್ ಉಪ್ಪುರು ಅವರು, ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಅದಕ್ಕೆ ಜೀವ ತುಂಬುವ ಅಪರೂಪದ ಪ್ರತಿಭಾವಂತ ಕಲಾವಿದ.
ಖಾಸಗಿ ಉದ್ಯಮದ ಒತ್ತಡಗಳ ನಡುವೆಯೂ ರಂಗಭೂಮಿಯ ಮೇಲಿನ ಅಪಾರ ಪ್ರೀತಿಯಿಂದ ನಿರಂತರವಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜರತ್ನ ಲೀಲಾಧರ ಶೆಟ್ಟಿ ಕಾಪು ಅವರ ಸಾರಥ್ಯದಲ್ಲಿರುವ ರಂಗ ತರಂಗ ಕಾಪು ತಂಡದ ಮೂಲಕ ಅವರು ಅತ್ಯುತ್ತಮ ರಂಗ ಕಲಾವಿದರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಯಾವುದೇ ಕಲಾವಿದರಿಗೆ ಅನಿವಾರ್ಯ ಕಾರಣಗಳಿಂದ ವೇದಿಕೆಗೆ ಹಾಜರಾಗಲು ಸಾಧ್ಯವಾಗದ ಸಂದರ್ಭಗಳಲ್ಲಿ, ತುರ್ತಾಗಿ ಆ ಪಾತ್ರವನ್ನು ವಹಿಸಿಕೊಂಡು ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಯಶಸ್ವಿಯಾಗಿ ನಿರ್ವಹಿಸಿರುವ ಹೆಗ್ಗಳಿಕೆ ಯಶವಂತ್ ಉಪ್ಪುರು ಅವರದ್ದು.
ಕೇವಲ ರಂಗಭೂಮಿಗೆ ಸೀಮಿತರಾಗದೆ, ನಮ್ಮ ಟಿವಿಯ "ಬಲೇ ತೆಲಿಪಾಲೇ" ಕಾರ್ಯಕ್ರಮದ ಮೂಲಕವೂ ತಮ್ಮ ಅಭಿನಯ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಅಲ್ಲದೆ, ವಿದೇಶಗಳಲ್ಲಿಯೂ ತಮ್ಮ ಕಲಾ ಸೇವೆಯನ್ನು ನೀಡುವ ಮೂಲಕ ತುಳು ರಂಗಭೂಮಿಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಕಲಾವಿದರಷ್ಟೇ ಅಲ್ಲದೆ, ಸಂಘಟಕರಾಗಿಯೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸರಳ ವ್ಯಕ್ತಿತ್ವ ಮತ್ತು ಸ್ನೇಹಪರ ನಡವಳಿಕೆಯಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ಅವರ ಕಲಾ ಪಯಣ ಇನ್ನಷ್ಟು ಯಶಸ್ಸಿನ ಮೆಟ್ಟಿಲೇರಲಿ. ಅನೇಕ ಸಂಘ-ಸಂಸ್ಥೆಗಳು ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಿ. ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಪ್ರತಿಭಾವಂತ ಕಲಾವಿದರು ಬೆಳೆಯುವಂತಾಗಲಿ. ಕಲಾಮಾತೆಯ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.

Interviews
ರಂಗನಕ್ಷತ್ರ-03
calendar_today2026-08-01person By Vinod Manchi

