The Journey
ಐಸಿರಿ ಕಲಾವಿದೆರ್ ಮಂಗಳೂರಿನ ಸಮೀಪವಿರುವ ಕರ್ನಾಟಕ-ಕೇರಳ ಗಡಿ ಭಾಗದ ಮಂಜೇಶ್ವರದ ಪ್ರಸಿದ್ಧ ವೃತ್ತಿಪರ ತುಳು ನಾಟಕ ತಂಡವಾಗಿದೆ. ಈ ಭಾಗದಲ್ಲಿ ಗುಣಮಟ್ಟದ ತುಳು ರಂಗಭೂಮಿಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ, ತಮ್ಮ 'ಶಾರದ ಆರ್ಟ್ಸ್' ತಂಡದ ಜತೆಜತೆಗೆ ಕೃಷ್ಣ ಜಿ. ಮಂಜೇಶ್ವರ ಅವರು ಸ್ಥಾಪಿಸಿ ಮುನ್ನಡೆಸಿದ ಎರಡನೇ ರಂಗ ಪ್ರಯತ್ನವಿದು. ಕರಾವಳಿಯ ಬದುಕಿನ ಸೊಗಡು, ಹಾಸ್ಯ, ಜಾಣ್ಮೆ ಹಾಗೂ ಭಾವನಾತ್ಮಕ ಅಂಶಗಳನ್ನು ಹೊತ್ತ ಜೀವಂತಿಕೆಯ ನಾಟಕಗಳಿಗೆ ಈ ತಂಡ ಹೆಸರುವಾಸಿಯಾಗಿದೆ. ಪ್ರತಿಭಾವಂತ ರಂಗ ಕಲಾವಿದರನ್ನೊಳಗೊಂಡ ಈ ತಂಡದಲ್ಲಿ ಪಳಗಿದ ಅನೇಕ ನಟರು ಮುಂದೆ ತುಳು ಮತ್ತು ಕನ್ನಡ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲೂ ಅಪಾರ ಮನ್ನಣೆ ಗಳಿಸಿದ್ದಾರೆ. ಕೃಷ್ಣ ಜಿ. ಮಂಜೇಶ್ವರ ಅವರ ಸೃಜನಶೀಲ ಮಾರ್ಗದರ್ಶನ ಮತ್ತು ಸಂಘಟನಾ ಚಾತುರ್ಯದಲ್ಲಿ 'ಐಸಿರಿ ಕಲಾವಿದೆರ್', ಮಂಜೇಶ್ವರ ವೃತ್ತಿಪರ ತುಳು ರಂಗಭೂಮಿಯ ಪರಂಪರೆಯನ್ನು ಜೀವಂತವಾಗಿರಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಗೌರವಾನ್ವಿತ ತಂಡವಾಗಿ ಬೆಳೆದುನಿಂತಿದೆ.
Meet the Collective
Creative Leadership

ಕೃಷ್ಣ ಜಿ ಮಂಜೇಶ್ವರ
Director / Writer / Patron

ಜೆ ಪಿ ತೂಮಿನಾಡು
Director / Advisor

ವಿಕ್ರಂ ದೇವಾಡಿಗ ಚಿತ್ರಾಪುರ
Director

ಪ್ರವೀಣ್ ಕಾಣಿಯೂರು
Musician
Actors

ಪುಷ್ಪರಾಜ್ ಬೊಳ್ಳರ್

ರವಿ ರಾಮಕುಂಜ

ಅನಿಲ್ ರಾಜ್ ಉಪ್ಪಳ

ಅಶೋಕ್ ಬೇಕೂರು
Upcoming Productions
Catch ಐಸಿರಿ live on stage this season.



