ರಂಗಭೂಮಿಯ ತೆರೆಮರೆಯಲ್ಲಿ ಮಿನುಗುವ ನಕ್ಷತ್ರ
ರಂಗಭೂಮಿಯ ತಾಂತ್ರಿಕ ಲೋಕದಲ್ಲಿ ಧ್ವನಿ ಸಂಯೋಜಕರಾಗಿ ಒಂದು ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸುತ್ತಾ, ತಮ್ಮ ಅಪರೂಪದ ಪ್ರತಿಭೆ, ಶ್ರದ್ಧೆ ಹಾಗೂ ನಿಷ್ಠೆಯಿಂದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಭಾವಂತರು ಸಂದೀಪ್ ಪೆರಂಪಳ್ಳಿ.
ತಮ್ಮದೇ ಆದ ವಿನೂತನ ಕಾರ್ಯಶೈಲಿಯ ಮೂಲಕ ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿರುವ ಅವರು, ಅನೇಕ ನಾಟಕಗಳು, ನೃತ್ಯ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಧ್ವನಿ ಸಂಯೋಜಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ತೆರೆಮರೆಯಲ್ಲಿದ್ದರೂ ಕಲಾರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿರುವ ನಿಜವಾದ ರಂಗನಕ್ಷತ್ರ.
ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ನವಚೈತನ್ಯ ಯುವಕ ಮಂಡಲ, ಪೆರಂಪಳ್ಳಿ ಇದರ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಧ್ವನಿ-ಬೆಳಕು ಸಂಘಟನೆಯ ಸದಸ್ಯರಾಗಿಯೂ ಹಾಗೂ ಪ್ರಬುದ್ಧ ಕಲಾ ತಂಡ – ಅಭಿನಯ ಕಲಾವಿದರು, ಉಡುಪಿ ತಂಡದ ಸದಸ್ಯರಾಗಿಯೂ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ.
ರಂಗ ಸಂಯೋಜನೆಯಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಅನಾವರಣಗೊಳಿಸಿರುವ ಸಂದೀಪ್ ಅವರು, ಧ್ವನಿಯ ಮಾಂತ್ರಿಕರಾಗಿ ಅನೇಕ ಯಶಸ್ವಿ ನಾಟಕಗಳ ಯಶಸ್ಸಿನ ಹಿಂದೆ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪರಿಶ್ರಮ, ಸಮರ್ಪಣೆ ಮತ್ತು ಕಲೆಯ ಮೇಲಿನ ಅಪಾರ ಪ್ರೀತಿಯೇ ಅವರನ್ನು ರಂಗಭೂಮಿಯ ತಾಂತ್ರಿಕ ಕ್ಷೇತ್ರದಲ್ಲಿ ವಿಶೇಷ ವ್ಯಕ್ತಿತ್ವವನ್ನಾಗಿ ರೂಪಿಸಿದೆ.
ಮುಂದಿನ ದಿನಗಳಲ್ಲಿಯೂ ನಿಮ್ಮ ಕಲಾ ಜೀವನ ಹಾಗೂ ವೃತ್ತಿ ಜೀವನ ಮತ್ತಷ್ಟು ಯಶಸ್ಸಿನ ಶಿಖರಗಳನ್ನು ತಲುಪಲಿ. ಇನ್ನೂ ಹೆಚ್ಚಿನ ಸಂಘ-ಸಂಸ್ಥೆಗಳು ನಿಮ್ಮ ಪ್ರತಿಭೆಯನ್ನು ಗುರುತಿಸಿ ಗೌರವಿಸಲಿ. ಕಲಾಮಾತೆಯ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. ನೀವು ಇನ್ನಷ್ಟು ಕಲಾಸಾಧನೆಗಳನ್ನು ಮಾಡಿ ರಂಗಭೂಮಿಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ನಮ್ಮ ಹೃತ್ಪೂರ್ವಕ ಹಾರೈಕೆ.
ಶುಭವಾಗಲಿ... ಅಭಿನಂದನೆಗಳು!

Interviews
ರಂಗ ನಕ್ಷತ್ರ - 01
calendar_today2026-07-23person By Vinod Manchi
